ಗ್ರಾಹಕೀಕರಣದ ಆಧಾರಸ್ತಂಬಗಳು [ಕಸ್ಟಮೈಸೇಶನ್‌ ಪಿಲ್ಲರ್‌ಗಳು]

4R ಪೋಷಕಾಂಶದ ಸಂರಕ್ಷಣಾ ತತ್ವಗಳು

ಓಸಿಪಿ ನ್ಯುಟ್ರಿಕ್ರಾಪ್ಸ್ ಬೆಳೆ ಉತ್ಪಾದಕತೆ, ಲಾಭದಾಯಕತೆ ಮತ್ತು ಸ್ಥಿರತೆಯನ್ನು ಹೆಚ್ಚಿಸಲು 4R ಪೋಷಕಾಂಶ ಸಂರಕ್ಷಣಾ ಮಾದರಿಯನ್ನು ಪ್ರಚಾರ ಮಾಡುತ್ತದೆ. ಸ್ಥಳೀಯ ಪರಿಸ್ಥಿತಿಗಳಿಗೆ ತಕ್ಕಂತೆ ರೂಪಿಸಲಾದ ಉತ್ತಮ ನಿರ್ವಹಣಾ ಪದ್ಧತಿಗಳ ಮೂಲಕ ರೈತರಿಗೆ ಬೆಂಬಲ ನೀಡಿ, ರಸಗೊಬ್ಬರ ಬಳಕೆಯನ್ನು ಸಮರ್ಪಕವಾಗಿ ಬಳಸುವಂತೆ ಮಾರ್ಗದರ್ಶನ ನೀಡುತ್ತದೆ ಮತ್ತು ಪೋಷಕಾಂಶ ನಷ್ಟವನ್ನು ಕಡಿಮೆ ಮಾಡುತ್ತದೆ. ಇದರಿಂದ ಬೆಳೆ ಅಗತ್ಯಗಳಿಗೆ ತಕ್ಕಂತೆ ಪೋಷಕಾಂಶ ಪೂರೈಕೆ ಸಾಧ್ಯವಾಗುತ್ತದೆ ಮತ್ತು ಪರಿಸರ ಸಂರಕ್ಷಣೆ ಸಾಧಿಸಲಾಗುತ್ತದೆ. ಸುಸ್ಥಿರ ಕೃಷಿ ಹಾಗೂ ಸದೃಢ ಕೃಷಿ ವ್ಯವಸ್ಥೆಗಳಿಗೆ 4R ಉಸ್ತುವಾರಿ ಮುಖ್ಯವಾಗಿರುತ್ತದೆ ಎಂದು ನಾವು ನಂಬುತ್ತೇವೆ.

ಸರಿಯಾದ ಮೂಲ

ಬೆಳೆಯ ಅಗತ್ಯಕ್ಕೆ ತಕ್ಕ ರಸಗೊಬ್ಬರದ ಆಯ್ಕೆ

ಸರಿಯಾದ ಸಮಯ

ಬೆಳೆಗಳಿಗೆ ಅಗತ್ಯವಿರುವ ಹಂತದಲ್ಲಿ ಪೋಷಕಾಂಶ ಪೂರೈಕೆ

4R

ಸರಿಯಾದ ಪ್ರಮಾಣ

ಬೆಳೆ ಅಗತ್ಯಕ್ಕೆ ತಕ್ಕಷ್ಟು ಮಾತ್ರ ರಸಗೊಬ್ಬರ ಬಳಕೆ

ಸರಿಯಾದ ಸ್ಥಳ

ಬೇರುಗಳಿಗೆ ಹತ್ತಿರವಾಗುವಂತೆ ಪೋಷಕಾಂಶಗಳನ್ನುನೀಡುವುದು

ಮಾಹಿತಿ ಹಾಗೂ ಗ್ರಾಹಕ ಕೇಂದ್ರಿತ ವಿಧಾನ

ಓಸಿಪಿ ನ್ಯೂಟ್ರೀಕ್ರಾಪ್‌ ನಾಲ್ಕು ಅಂತರ್‌ಸಂಪರ್ಕಿತ ಪ್ರಮುಖ ಹಂತಗಳ ಮೂಲಕ ಮಾಹಿತಿ-ಚಾಲಿತ ಗ್ರಾಹಕೀಕರಣವನ್ನು ಅನುಸರಿಸುತ್ತದೆ: ಮಣ್ಣಿನ ವಿಶ್ಲೇಷಣೆ, ರೈತ-ಕೇಂದ್ರಿತ ಪರಿಹಾರಗಳು, ಡಿಜಿಟಲ್‌ ತಂತ್ರಜ್ಞಾನದ ಏಕೀಕರಣ ಹಾಗೂ ಗ್ರಾಹಕೀಕೃತ ವಸ್ತುವಿನ ಅಭಿವೃದ್ಧಿ. ಈ ಪ್ರಕ್ರಿಯೆಯು ಸಂಪನ್ಮೂಲಗಳ ಸಮರ್ಪಕ ಬಳಕೆಯನ್ನು ಖಚಿತಪಡಿಸಿ, ರೈತರಿಗೆ ನಿಜವಾದ ಮತ್ತು ದೀರ್ಘಕಾಲೀನ ಮೌಲ್ಯವನ್ನು ಒದಗಿಸುತ್ತದೆ.

ಹಂತ 01

ಮಣ್ಣಿನ ಅಗತ್ಯತೆಗಳು

ಮಣ್ಣಿನ ವಿಶ್ಲೇಷಣೆ ಹಾಗೂ ಡಿಜಿಟಲ್‌ ಮ್ಯಾಪಿಂಗ್‌ ಪೋಷಕಾಂಶಗಳ ಅಗತ್ಯತೆಗಳನ್ನು ಗುರುತಿಸುವ ಮೂಲಕ ಹಾಗೂ ನೈಜ‌-ಸಮಯದ, ಗ್ರಾಹಕೀಕೃತ ಶಿಫಾರಸುಗಳನ್ನು ನೀಡುವ ಮೂಲಕ ನಿಖರವಾದ, ವಲಯ- ನಿರ್ದಿಷ್ಟ ಫಲವತ್ತೀಕರಣವನ್ನು ಸಕ್ರಿಯಗೊಳಿಸುತ್ತದೆ – ಇದು ಹೆಚ್ಚು ಪರಿಣಾಮಕಾರಿ, ಸುಸ್ಥಿರ, ಹಾಗೂ ಉತ್ಪಾದಕ ಕೃಷಿಗೆ ಕಾರಣವಾಗುತ್ತದೆ.

ಹಂತ 02

ಕೃಷಿಕರ ಹಾಗೂ ಗ್ರಾಹಕರ ಕೇಂದ್ರ

ಓಸಿಪಿ ನ್ಯೂಟ್ರೀ ಕ್ರಾಪ್ಸ್‌ ಕೃಷಿಕರು ಹಾಗೂ ಗ್ರಾಹಕರನ್ನು ತನ್ನ ಕಾರ್ಯತಂತ್ರದ ಕೇಂದ್ರಬಿಂದುವಾಗಿ ಇರಿಸುತ್ತದೆ, ಪ್ರತಿಯೊಂದು ಪರಿಹಾರವನ್ನು ವಿಚಾರಪೂರ್ವಕವಾಗಿ ವಿನ್ಯಾಸಗೊಳಿಸಲಾಗಿದೆ ಹಾಗೂ ಅವರ ಪಯಣದಲ್ಲಿ ಸರಾಗವಾಗಿ ಸಂಯೋಜಿಸಲಾಗಿದೆ ಎಂದು ಖಚಿತಪಡಿಸಲು ಅವರ ಬಳಕೆ ಹಾಗೂ ನಿರ್ದಿಷ್ಟ ಅಗತ್ಯತೆಗಳ ಆಳವಾದ ತಿಳುವಳಿಕೆಯನ್ನು ಸಕ್ರಿಯಗೊಳಿಸುತ್ತದೆ.

ಹಂತ 04

ಗ್ರಾಹಕೀಕೃತ ಪರಿಹಾರಗಳು

ಮಣ್ಣಿನ ಅ೦ಕಿ ಸ೦ಖ್ಯೆ ಮಾಹಿತಿ, ಗ್ರಾಹಕರ ಒಳನೋಟಗಳು, ಹಾಗೂ ಡಿಜಿಟಲ್‌ ತಂತ್ರಜ್ಞಾನವನ್ನು ಸಂಯೋಜಿಸುವ ಮೂಲಕ, ಓಸಿಪಿ ನ್ಯೂಟ್ರೀಕ್ರಾಪ್ಸ್‌ ಮೂಲ ರಸಗೊಬ್ಬರವನ್ನು ಮೀರಿಸುವ ಸಮಗ್ರವಾದ, ಅತ್ಯಧಿಕ-ಮೌಲ್ಯದ ಪರಿಹಾರಗಳನ್ನು ನೀಡುತ್ತದೆ- ಕೃಷಿಕರ ನಿರ್ದಿಷ್ಟ ಅಗತ್ಯಗಳನ್ನು ಪೂರೈಸುವ ಹಾಗೂ ದೀರ್ಘ-ಕಾಲೀನ ಪ್ರಭಾವವನ್ನು ಹೆಚ್ಚಿಸುವ ಸೂಕ್ತವಾದ ಪ್ಯಾಕೇಜ್‌ಗಳನ್ನು ನೀಡುತ್ತದೆ.

ಹಂತ 03

ಡೇಟಾ ಹಾಗೂ ಡಿಜಿಟಲ್‌ ತಂತ್ರಜ್ಞಾನ

ಓಸಿಪಿ ನ್ಯೂಟ್ರಿಕ್ರಾಪ್ಸ್‌ ಆಧುನಿಕ ಕೃಷಿ ಪರಿಹಾರಗಳ ಮೂಲಕ ಆವಿಷ್ಕಾರವನ್ನು ಮುನ್ನಡೆಸುತ್ತದೆ, ಇದು ಜಾಗತಿಕ ತಜ್ಞರ ನೆಟ್‌ವರ್ಕ್‌ನಿಂದ ನಡೆಯುತ್ತದೆ ಹಾಗೂ ಡಿಜಿಟಲ್‌ ತಂತ್ರಜ್ಞಾನದಿಂದ ಸಮೃದ್ಧವಾಗಿದೆ- ಕೃಷಿಕರಿಗೆ ನಿಜವಾದ ಮೌಲ್ಯವನ್ನು ಸೃಷ್ಟಿಸುವ ಸಮಗ್ರವಾದ ಹೆಚ್ಚಿನ-ಪ್ರಭಾವದ ಬೆಂಬಲವನ್ನು ನೀಡುತ್ತದೆ.
Scroll to Top